Publications


See More

±ÀgÀt ¸Á»vÀå ¥ÀjµÀvÀÄÛ

ಭಾರತೀಯ ಧರ್ಮ, ಆಧ್ಯಾತ್ಮ ಮತ್ತು ಸಾಹಿತ್ಯದ ಇತಿಹಾಸದಲ್ಲಿ ೧೨ನೆಯ ಶತಮಾನ ಆತ್ಯಂತ ಕ್ರಾಂತಿಕಾರಕವಾದ ಒಂದು ಘಟ್ಟ. ಅಂತಸತ್ವ ಮತ್ತು ಬಹಿರ್ ರೂಪಗಳೆರಡ್ರಲ್ಲಿಯೂ ಇದಕ್ಕೆ ಸಂವಾದಿಯಾದುದು ಇನ್ನೊಂದಿಲ್ಲ. ಜೀವನವನ್ನು ಪೂರ್ಣ ದೃಷ್ಟಿಯಿಂದ ಕಂಡು ಜಾತಿಭೇದಗಳ ತೊಡಕಿಲ್ಲದೆ ಮಾನವನ ಎಲ್ಲ ಶಕ್ತಿಗಳ ಪೂರ್ಣ ವಿಕಾಸಕ್ಕೆ ಕಾರಣವಾಗುವ ಮಾರ್ಗವನ್ನು ನಿರ್ಮಿಸಲು ಬಸವಣ್ಣನವರ ನೇತೃತ್ವದಲ್ಲಿ ಶರಣರು ವಚನಸಾಹಿತ್ಯ ಮಾಧ್ಯಮವನ್ನು ಬಳಸಿಕೊಂಡರು. ಆ ಪ್ರಯತ್ನದಲ್ಲಿ ತಮಗೆ ಅಡ್ಡಿಯಾಗಿದ್ದ ಜಡ ಸಂಪ್ರದಾಯದ ಬಂಡೆಗಳನ್ನು ವಿಚಾರದ ಕೊಡತಿಯಿಂದ ಬಡಿದು, ಕ್ರಾಂತಿಕಾರವಾದ ಕ್ರಿಯಾಶೀಲತೆಯಿಂದ ಗುಡಿಸಿಹಾಕಿದರು. ಶಾಶ್ವತವಾದ ಮಾನವೀಯ ಮೌಲ್ಯಗಳಿಂದ ಮತ್ತು ದಾರ್ಶನಿಕ ಚಿಂತನೆಗಳಿಂದ ಕೂಡಿದ ಈ ಸಾಹಿತ್ಯ ಪ್ರಭಾವಶಾಲಿಯಾಗಿಯೇ ಉಳಿದು ಬಂದಿದೆ. ಇಂದಿಗೂ ಪ್ರಸ್ತುತವಾಗಿದೆ. ರಾಷ್ಟ್ರವ್ಯಾಪಿಯಷ್ಟೇ ಅಲ್ಲ, ವಿಶ್ವವ್ಯಾಪಿಯಾಗಿ ಬೆಳೆಯುವಷ್ಟು ಸತ್ವಶಾಲಿಯಾದ ವೈಚಾರಿಕವಾದ ಮಾನವಧರ್ಮವನ್ನು ಇದು ಪ್ರತಿಪಾದಿಸುವುದು ಮಾತ್ರವಲ್ಲ, ಅದನ್ನು ಆಚರಿಸಿ ತೋರಿಸಿದ ಸಾಧಕರ ಅನುಭವದ ನುಡಿಕಿರಣಗಳಿಂದ ಅಂತರಂಗದ ಬೆಳಕನ್ನು ಬೀರುತ್ತದೆ. ಇದರ ತತ್ತ್ವ ಮತ್ತು ಆಚರಣೆಗಳು ಸೀಮೋಲ್ಲಂಘನೆಯನ್ನು ಪಡೆದು ವಿಶ್ವವ್ಯಾಪಿಯಾಗಬೇಕಾಗಿದೆ. ಈ ಉದ್ದೇಶಕ್ಕಾಗಿ ಸುತ್ತೂರು ಜಗದ್ಗುರು ಡಾ. ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸಂಸ್ಥಾಪಿಸಿದರು. ಅವರ ೭೦ ನೆಯ ವರ್ಷದ ಅಮೃತೋತ್ಸವ ಸಂದರ್ಭದಲ್ಲಿ ದಿನಾಂಕ ೨೯.೮.೧೯೮೬ ರಂದು ಅವರು ಇದನ್ನು ಉದ್ಘಾಟಿಸಿದರು.
ಲಿಂ. ಜಗದ್ಗುರುಗಳ ಸಂಕಲ್ಪದಂತೆ ಈ ಸಂಸ್ಥೆಗೆ ಈಗ ಆಶಾದಾಯಕ ಹೆಜ್ಜೆ ಇಟ್ಟಿದೆ. ಪರಿಷತ್ತಿನ ಸ್ಥಾಪಕ ಅಧ್ಯಕ್ಷರು ಲಿಂ. ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು."The rich make temples to Shiva, What Shall I, poor man."